Tuesday, April 21, 2020

ಭಾರತದಲ್ಲಿ ಸಂಪತ್ತಿನ ಮೇಲಿನ ತೆರಿಗೆಯ ಅನಿವಾರ್ಯತೆ!


-ಸಂದೀಪ್ ಎಸ್ ರಾವಣೀಕರ್


              ಏಪ್ರಿಲ್ 1 ರಿಂದ ಪ್ರಾರಂಭವಾದ 2020-21 ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡ 1.5 ರಿಂದ 2.8 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್ ಕೆಲವು ದಿನಗಳ ಹಿಂದೆ ಹೇಳಿತ್ತಾದರೂ, ಇದು 1991 ಆರ್ಥಿಕ ಸುಧಾರಣೆಗಳ ನಂತರ ದಾಖಲಾದ ನಿಧಾನಗತಿಯ ಬೆಳವಣಿಗೆಯಾಗಿದೆ. ಇಂಥಹ ಆರ್ಥಿಕ ಬೆಳವಣಿಗೆ ಹದೆಗಟ್ಟಿದ್ದ ಪರಿಸ್ಥಿತಿಯಲ್ಲಿ ಕಟ್ಟೆ ಹೊಡೆದ ನೀರಿನಂತೆ ಎರಗಿದ CORONA ಇಂದು ಪ್ರವಾಹವನ್ನು ಮೀರಿದ ಸುನಾಮಿಯಂತೆ ದಿನದಿಂದ ದಿನಕ್ಕೆ ತನ್ನ ಇರುವಿಕೆಯ ವಿಸ್ತಾರವನ್ನು ಹೆಚ್ಚಿಸುತ್ತಲೇ ಇದೆ. ಎಷ್ಟೇ ಕಟ್ಟುನಿಟ್ಟಿನ ನಿಯಂತ್ರಣ ಹಾಕಿದ್ದಾಗಿಯೂ, ಸೋಂಕಿನ ಪ್ರಮಾಣದಲ್ಲಿ ಗಣನೀಯ ಜಿಗಿತ ಮುಂದುವರಿಯುತ್ತಲೇ ಸಾಗಿದೆ.  136.9 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವ ವೈರಸ್ ನಿಂದ ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿಯು ಭಾರಿ ಪ್ರಮಾಣದ ನಷ್ಟ ಅನುಭವಿಸಿದೆ. ಆರ್ಥಿಕ ವಿಶ್ಲೇಷಕರು ಮತ್ತು ಕೈಗಾರಿಕಾ ಮಂಡಳಿಗಳ ಪ್ರಕಾರ, ಭಾರತದಲ್ಲಿ ಆದ ಮೊದಲ ಹಂತದ 21 ದಿನಗಳ Lockdown ನಿಂದಾಗಿ ಸುಮಾರು 7-8 ಲಕ್ಷ ಕೋಟಿಯಷ್ಟು ಆರ್ಥಿಕ ನಷ್ಟವಾಗಿದೆಯೆಂದು ಎಕನಾಮಿಕ್ ಟೈಮ್ಸ್ ಇತ್ತೀಚೆಗೆ ವರದಿ ಮಾಡಿತ್ತು ( ಮೊತ್ತ ಕರ್ನಾಟಕ ರಾಜ್ಯದ ಸುಮಾರು ಮೂರುವರ್ಷಗಳ ವಾರ್ಷಿಕ ಬಜೆಟ್ ಗೆ ಸಮ).

ಕೇಂದ್ರ ಸರ್ಕಾರ ಸಾಂಕ್ರಾಮಿಕ ರೋಗ  ತಡೆಯಲು ಘೋಷಿಸಿರುವ ಸುಮಾರು 1.7 ಲಕ್ಷ ಕೋಟಿಯು, ಈಗಾಗಲೇ ಘೋಷಣೆ ಗೊಂಡಿದ್ದ ಹಳೆಯ ಪಿಎಂ ಕಿಸಾನ್ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ)ಯಂತಹ ಘಟಕಗಳನ್ನು ಒಳಗೊಂಡಿದ್ದು, ಒಟ್ಟು ಜಿಡಿಪಿ ಶೇಕಡಾ 1 ಕ್ಕಿಂತಲೂ ಕಡಿಮೆಯಿದೆ. ಅಲ್ಲಿಗೆ ಸುಮಾರು 136 ಕೋಟಿಗಿಂತಲೂ ಜನಸಂಖ್ಯೆ ಹೆಚ್ಚಿರುವ ಭಾರತಕ್ಕೆ ಘೋಷಿತ ಮೊತ್ತದಿಂದ ಯಾವ ಮಹತ್ಕಾರ್ಯ ಮಾಡಲು ಸಾಧ್ಯ?  ಹಾಗಾದರೇ, ಇಂಥಹ ಒತ್ತಡ ಸಮಯದಲ್ಲಿ ಸರ್ಕಾರಗಳ ಹಣಕಾಸು ಹೊಂದಿಸುವಿಕೆ ನಿರ್ಧಾರಗಳು ಹೇಗಿರುತ್ತದೆ ಎಂಬ ಗೊಂದಲ ಸಾಮಾನ್ಯವಾಗಿದೆ. ಇತ್ತೀಚೆಗೆ ಸದ್ದುಮಾಡಿದ "ಹೆಲಿಕಾಪ್ಟರ್ ಮನಿ" ಎಂಬ ಪರಿಕಲ್ಪನೆಯು ಸಾದ್ಯ-ಅಸಾಧ್ಯ ಗಳ ನಡುವೆ ಹಲವು ಗೊಂದಲಗಳಿಗಷ್ಟೇ ಕಾರಣವಾಗಿ  ಮಾಯವಾಯಿತು. ಹಾಗೆಯೇ ವಿಷಯದಲ್ಲಿ ಸರ್ಕಾರದ ಮುಂದೆ  ಯಾವ ಕಾರ್ಯಯೋಜನೆಗಳು ಇಲ್ಲ  ಅಂತಲೇ ಉತ್ತರ ಬಂದಿತ್ತು.

          ಹಾಗಾದರೇ, ಸರ್ಕಾರದ ಬೊಕ್ಕಸಕ್ಕೆ ಸಂದರ್ಭದಲ್ಲಿ ಆದಾಯದ ಮೂಲವನ್ನು ಹೇಗೆ? ಎಲ್ಲಿಂದ? ಪಡೆಯಬಹುದು ಎಂಬ ಪ್ರಶ್ನೆಗೆ, ನಮಗೆ ನಿಜಕ್ಕೂ ಯೂರೋಪಿಯನ್ ಸರ್ಕಾರಗಳು ಪ್ರಸ್ತಾಪಿಸಿರುವ "ಕೋವಿಡ್ ಬಾಂಡ್" ನೀತಿ  ಬಹುಮುಖ್ಯವೆನಿಸುತ್ತದೆ. ಪ್ರಕಾರವಾಗಿ, ಕ್ಯಾಮಿಲ್ಲೆ ಲ್ಯಾಂಡೈಸ್, ಇಮ್ಯಾನುಯೆಲ್ ಸಾಜ್ ಮತ್ತು ಗೇಬ್ರಿಯಲ್ ಸುಜ್ಮಾನ್ ರವರು ಬರೆದಿರುವ "A progressive European wealth tax to fund the European COVID response" ಪ್ರಬಂಧದಲ್ಲಿ ಅವರುಗಳೇ ಪ್ರಸ್ತಾಪಿಸಿರುವಂತೆ, "ಐರೋಪ್ಯ ಸರ್ಕಾರಗಳು ಕೋವಿಡ್ ಬಾಂಡುಗಳನ್ನು ಹೊರಡಿಸುವುದು ಮತ್ತು ಅದರ ಪರಿಣಾಮವಾಗಿ ಬಂದ ಸಾಲವನ್ನು ಅತ್ಯಂತ ಶ್ರೀಮಂತ 1% ಜನಸಂಖ್ಯೆಯ ಸಂಪತ್ತಿನ ಮೇಲೆ ತೆರಿಗೆ (Wealth Tax) ವಿಧಿಸುವ ಮೂಲಕ  ಹಣಕಾಸು ನೀಡುವುದು" ಎಂಬುದಾಗಿದೆ. ಹಾಗೆಯೇ ರೀತಿಯ ಯೋಜನೆಯು  ನ್ಯಾಯಸಮ್ಮತವಾಗಿದ್ದು, ಒತ್ತಡ ರಹಿತ ತೆರಿಗೆ ಗುರಿಯನ್ನು ಮತ್ತು ಹಣದುಬ್ಬರ ರಹಿತ ಕಾರ್ಯವಿಧಾನದ ಅರ್ಹತೆಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ಆದರೆ ಭಾರತದ ಮಟ್ಟಿಗೆ ಇದು ಸಾಧ್ಯವಾ? ಎಂದು ನೋಡುವುದಾದರೇ, ಹಿಂದೆ ಇದ್ದ ಸಂಪತ್ತಿನ ತೆರಿಗೆಯನ್ನು (Wealth Tax) ವಿಧಿಸುವ ಉದ್ದೇಶವು ವಿವಿಧ ವರ್ಗದ ತೆರಿಗೆದಾರರಲ್ಲಿ ಸಮಾನತೆಯನ್ನು ತರುವುದಾಗಿತ್ತು. ಆದರೇ, ತೆರಿಗೆಯನ್ನು ಮರುಪಡೆಯಲು ಆಗುವ ವೆಚ್ಚವೂ ಅದರಿಂದ ಪಡೆದ ಪ್ರಯೋಜನಗಳಿಗಿಂತ ಹೆಚ್ಚಿರುವುದರಿಂದ ಇದನ್ನು 2015-16 ಬಜೆಟ್ ನಲ್ಲಿ ರದ್ದುಪಡಿಸಲಾಯಿತು. ಆದರೇ, ಇಂದಿನ ಪರಿಸ್ಥಿತಿಯ ಕಾರಣದಿಂದಾಗಿ ಸಂಪತ್ತಿನ ತೆರಿಗೆಯು ಯಾವುದೋ ಕನಿಷ್ಠ ಸ್ವರೂಪದಲ್ಲಿ, ಒಂದು ಸಂದರ್ಭಕ್ಕದರೂ ಅಥವಾ ತುರ್ತುಪರಿಸ್ಥಿತಿಯ ಅಳತೆಗೋಲಾಗಿಯಾದರೂ, ಭಾರತದಲ್ಲಿ ಪರಿಚಯಿಸಬಹುದೇ! ಎಂಬುದನ್ನು ನೋಡಬೇಕಾಗಿದೆ.

          ಸದ್ಯ ಭಾರತದಲ್ಲಿರುವ ಗೃಹ ಸಂಪತ್ತಿನ ಹೀಗಿರುವ ಮಾಹಿತಿಯೂ 2012-13 ರದ್ದಾಗಿದೆ ಮತ್ತು ದತ್ತಾಂಶದಲ್ಲಿರುವ ಆಸ್ತಿ ವಿತರಣೆಯು ಸಾಕಷ್ಟು  ಅಸಮಾನತೆಯನ್ನು ತೋರುತ್ತದೆ. ಏಕೆಂದರೆ, ಶ್ರೀಮಂತರ ಮೂಲಕ ಸಂಪತ್ತಿನ ಮೇಲೆ ವರದಿ ಮಾಡುವ ಕಾರಣದಿಂದ, ಸರ್ವೆಸಾಮಾನ್ಯವಾಗಿ ಇದು ಅಸಮಾನತೆಯಿಂದ ಕೂಡಿದೆ ಎಂಬುದು ಗೊತ್ತಿರುವ ಸಂಗತಿಯಾಗಿದೆ. ನಿಟ್ಟಿನಲ್ಲಿ ಹೆಚ್ಚಿನ ವಾಸ್ತವಿಕ ಚಿತ್ರಣವನ್ನು ಪಡೆಯಲು ಹಲವಾರು ಮೂಲಗಳತ್ತ ತಿರುಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.

ಭಾರತದ ಮಟ್ಟಿಗೆ ಅಂತಹ ಒಂದು ಪ್ರಮುಖ ಅಧಿಕೃತೇತರ ಮೂಲವೆಂದರೆ IIFL WALTH HURAN ಭಾರತೀಯ ಶ್ರೀಮಂತರ ಪಟ್ಟಿಯ ವಾರ್ಷಿಕ ವರದಿ. 2012 ರಿಂದ ಪಟ್ಟಿಯು ಪ್ರತಿವರ್ಷ 1000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವವರ ಮಾಹಿತಿಯನ್ನು ಒದಗಿಸುತ್ತಿದೆ. ಪ್ರಕಾರವಾಗಿ IIFL - wealth Huran India rich 2019 ಪ್ರಕಾರ ಭಾರತದಲ್ಲಿ ಸುಮಾರು 953 ವ್ಯಕ್ತಿಗಳ ಒಟ್ಟು ಮೌಲ್ಯವನ್ನು ಪತ್ತೆಹಚ್ಚಿದ್ದು, ಅವರುಗಳ ಸರಾಸರಿ ಸಂಪತ್ತು ಸುಮಾರು 5,278 ಕೋಟಿ ರೂ ಎಂದು ಅಂದಾಜಿಸಿದೆ. ಇದೇ ವರದಿಯ ಪ್ರಕಾರ ಟಾಪ್ 10 ಕುಟುಂಬಗಳ ಒಟ್ಟು ಸಂಪತ್ತು ಸುಮಾರು 12.94 ಲಕ್ಷಕೋಟಿಯಷ್ಟಿದೆ.

ಇಲ್ಲಿ ಅತ್ಯಂತ ಸ್ಥೂಲವಾಗಿ ಹೇಳುವುದಾದರೇ, ಸುಮಾರು 130 ಕೋಟಿ ಜನಸಂಖ್ಯೆಯ ಭಾರತದ ಒಂದು ಕುಟುಂಬದ ಜನರ ಸಂಖ್ಯೆ ಸರಾಸರಿ ಐದು ಎಂದಾದರೆ, ಭಾರತದಲ್ಲಿ ಒಟ್ಟು 26 ಕೋಟಿ ಕುಟುಂಬಗಳಾಗಲಿವೆ. ಹಾಗಾದರೇ Huran Rich List ನಲ್ಲಿರುವ 953 ಕುಟಂಬಗಳ ಪಟ್ಟಿಯು 26 ಕೋಟಿ ಕುಟುಂಬದಲ್ಲಿ ಸರಿಸುಮಾರು 0.0000037 ರಷ್ಟು ಸಣ್ಣ ಪ್ರಮಾಣದವರಾಗುತ್ತಾರೆ. ಅಂದರೆ ಸುಮಾರು 5,278 ಕೋಟಿಗಳಷ್ಟು ಸರಾಸರಿ ಸಂಪತ್ತು ಹೊಂದಿರುವ 953 ಕುಟುಂಬಗಳ ಒಟ್ಟು ಆಸ್ತಿ ಸುಮಾರು 50.3 ಲಕ್ಷ ಕೋಟಿಗಳಷ್ಟು(ಇದು ಭಾರತದ ಸುಮಾರು ಎರಡು ವರ್ಷಗಳ ವಾರ್ಷಿಕ ಬಜೆಟ್ ಗೆ ಸಮ). ಭಾರತದ GDP ಪ್ರಸ್ತುತ ಬೆಲೆಯಲ್ಲಿ 190.10 ಲಕ್ಷ ಕೋಟಿ ಯಷ್ಟಿದ್ದು, 0.0000037 ರಷ್ಟಿರುವ 953 ಕುಟುಂಬಗಳ ಸಂಪತ್ತು ಒಟ್ಟು GDP ಶೇಕಡ 26.4 ರಷ್ಟಿದೆ ಹಾಗೂ ಕೇವಲ 7 ವರ್ಷಗಳ ಅವಧಿಯಲ್ಲಿ ಅಂದರೆ, 2012 ರಿಂದ 2019 ರವರೆಗೆ Huran ಅಂಕಿ ಅಂಶಗಳ ಪ್ರಕಾರ ಶ್ರೀಮಂತ ಪಟ್ಟಿಯ ಗಾತ್ರವು 100 ರಿಂದ 953 ಕ್ಕೇರಿದೆ.

ಅರ್ಥಶಾಸ್ತ್ರಜ್ಞರಾದ ಎಸ್. ಸುಬ್ರಮಣಿಯನ್ ಪ್ರಕಾರ 953 ಕುಟುಂಬಗಳ GDP ಶೇಕಡ 26.4ರಷ್ಟು ಸಂಪತ್ತಿನ ಮೇಲೆ 4% ನಷ್ಟು ಏಕರೂಪ ಕನಿಷ್ಠ ತೆರಿಗೆಯನ್ನು ವಿಧಿಸಿದರೆ, ಜಿಡಿಪಿಯ ಶೇಕಡ 1ಕ್ಕಿಂತ ಹೆಚ್ಚಿನ ಆದಾಯ ಸರ್ಕಾರಕ್ಕೆ ಸಿಗುತ್ತದೆ. ಇದು ಈ ಸಂದರ್ಭಕ್ಕೆ ಅವಶ್ಯವಾಗಿರುವ ಅತ್ಯಂತ ದೊಡ್ಡ ಮೊತ್ತ ಎಂಬುದನ್ನು ಮರೆಯುವಂತಿಲ್ಲ. ಈಗಾಗಲೇ ಹೇಳಿರುವಂತೆ, ಸರ್ಕಾರವು CORONA ವಿರುದ್ಧದ ಹೋರಾಟಕ್ಕೆ ವಿನಿಯೋಗಿಸಲಿಚ್ಚಿಸಿರುವುದು GDP ಶೇ. 1ಕ್ಕಿಂತ  ಕಡಿಮೆ ಇದೆ. 130 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಸಾಮೂಹಿಕ ಸಮಸ್ಯೆಯ ಸಂದರ್ಭದಲ್ಲಿ ಸರ್ಕಾರಗಳು ಸರ್ಕಾರಿ ನೌಕರರ ಸಂಬಳ ಕಡಿತಗೊಳಿಸುವುದು ಮತ್ತು "PM-CM CARES" ನಿಧಿಗೆ  ಹಣಕಾಸಿನ ಸಹಾಯ ನೀಡುವಂತೆ ಕೋರುವ ತಾತ್ಕಾಲಿಕ ಪರಿಹಾರಗಳ ಜೊತೆಗೆ, ಹಿಂದಿನ ಸಂಪತ್ತಿನ ತೆರಿಗೆಯನ್ನು ಹೊಸ ಸ್ವರೂದ ನೀತಿಯೊಂದಿಗೆ ಜಾರಿಗೆ ತರುವುದು, ಕಾರ್ಪೊರೇಟ್ ತೆರಿಗೆಯನ್ನು  ಕಡಿಮೆಗೊಳಿಸದಿರುವಂತೆ ನೋಡಿಕೊಳ್ಳುವುದು ಹೊತ್ತಿನ ಜರೂರು. ಮೂಲಕ ಸರ್ಕಾರಗಳು ಕೋವಿಟ್ ಪ್ಯಾಕೇಜನ್ನು ದ್ವಿಗುಣಗೊಳಿಸುವ ಅಲ್ಪಪ್ರಮಾಣದ ಹೊಸ ನೀತಿಯನ್ನು ಪರಿಗಣಿಸುವುದು ಮತ್ತು ಐರೋಪ್ಯ ರಾಷ್ಟ್ರಗಳ ನಿಯಮಗಳನ್ನು ಪಾಲಿಸುವುದು ಇವತ್ತಿನ ಅನಿವಾರ್ಯವಾಗಿದೆ.