Friday, April 17, 2020

ಹಾಗಾದರೆ ಖುಷಿಯಾಗಿರುವುದು ಎಂದರೇನು ?

                        - ಸಂದೀಪ್ ಎಸ್ ರಾವಣೀಕರ್

                             

              ಸುಮಾರು 60 ವರ್ಷಗಳ ಸರಾಸರಿ ಜೀವಿತಾವಧಿಯನ್ನಷ್ಟೇ ಹೊಂದಿರುವ ನಾವು, ಕನಿಷ್ಠ 20 ರಿಂದ 23 ವರ್ಷ ಚಿಕ್ಕಂದಿನ ಆಟ-ಓದು-ಬರಹ-ಶಾಲೆ-ಕಾಲೇಜು-ಫ್ರೆಂಡ್ಸ್-ಸಣ್ಣಪುಟ್ಟ ಪಾರ್ಟಿಗಳಲ್ಲೆ ಕಳೆದೋಗ್ತೀವಿ. ಇನ್ನೊಂದಷ್ಟು ವರ್ಷ ಭವಿಷ್ಯಕ್ಕೆ ಆಧಾರವಾಗುವ ಕೆಲಸದ ಹುಡುಕಾಟದಲ್ಲಿ ಮತ್ತು ಜವಾಬ್ದಾರಿ ಇಳಿಸಿಕೊಳ್ಳುವ  ಕಡೆಗೆ ಕಳೆದು ಹೋಗುತ್ತದೆ. ಅಷ್ಟೊತ್ತಿಗೆ, 27 ರಿಂದ 30 ವರ್ಷವಂತೂ ಅನಾಯಸವಾಗಿ ಮುಗಿದಿರುತ್ತೆ. ಸಾಮಾನ್ಯವಾಗಿ ಇವತ್ತಿನ ಕಾಲಘಟ್ಟಕ್ಕೆ, ಇನ್ನು ಮಿಕ್ಕ ಸಮಯ ಪ್ರೀತಿ, ಮದುವೆ, ಮಕ್ಕಳು,ಕೆಲಸ, ಫ್ಯಾಮಿಲಿ  ಅಂತಲೇ ಹೋಗಿಬಿಡುತ್ತದೆ. ಇದು ಸಂದರ್ಭಕ್ಕೆ ತಕ್ಕಂತೆ ಒಬ್ಬರಿಂದ ಮತ್ತೊಬ್ಬರಿಗೆ ಬೇರೆಯಾದರೂ, ಸಮಯ ಮಾತ್ರ ಕಳೆದಿರುತ್ತದೆ.

          Settle ಆಗ್ಬೇಕು ಅನ್ಕೊಂಡು ಸಮಯ ದೂಡುವುದು ಬಹುತೇಕರ ಕೆಲಸವಾದರೇ, ಬೇರೆಯವರ ಸಮಸ್ಯೆಗಳ ಸ್ಪಂದನೆಗಳಿಗಷ್ಟೇ ಬದುಕಿರುವವರಿದ್ದಾರೆ. ಬದಲಾವಣೆಯ ಕಾರ್ಯದಲ್ಲಿ ಹಲವರು ಬಂಧಿಯಾದರೇ, ಹೊತ್ತ ಕಾಯಿಲೆಯ ಚಿಂತೆಯಲ್ಲೇ ಕೆಲವರು ಸೊರಗುವವರಿದ್ದಾರೆ. ಕನಸ ಬೆನ್ನೆತ್ತಿ ಹೊರಡುವವರು ಒಂದೆಡೆಯಾದರೇ, ಇರುವುದರಲ್ಲೇ ಕಾಲ ಮುಂದೂಡುವವರಿದ್ದಾರೆ. ಇಡೀ ಜೀವನ ಸಮಸ್ಯಗಳ ಪರಿಹಾರಕ್ಕಷ್ಟೆ ಎಂದು ತಿಣುಕಾಡುವವರಿದ್ದರೇ, ಜೀವನ ಪೂರ್ತಿ ಕಾಲ ಕಳೆಯುವುದೇ ಸಮಸ್ಯೆಯಾಗಿ ಬದುಕಿರುವವರಿದ್ದಾರೆ. ಒಟ್ಟಿನಲ್ಲಿ, ನಮ್ಮ ಸೃಷ್ಟಿಯ ಸತ್ಯ ಕೇವಲ  ಮೇಲಿನವುಗಳಿಗಷ್ಟೇ ತಳುಕು ಹಾಕಿಕೊಂಡಿದೆ ಅಂದರೆ ಅತಿಶಯೋಕ್ತಿಯಾಗಲಾರದು. ಖುಷಿಯ ಸಣ್ಣ ಕಾರಣಗಳು ದೊಡ್ಡ ಬದಾಲಾವಣೆಯನ್ನು ತರಬಲ್ಲದು, ಎಂಬುದರಲ್ಲಿ ನಂಬಿಕೆಯಿಲ್ಲದ ನಾವು ಖುಷಿಯಾಗಿರಲು ಬೇರೆಯದ್ದೇ ಏನೋ ಬೇಕೆನಿಸುವಷ್ಟು ಊಹೆಯಲ್ಲಿದ್ದೇವೆ.

             ಖುಷಿ ಏನೆಂದು ತಿಳಿಯದ ವಯಸ್ಸಿನಲ್ಲಿ ಖುಷಿಯಾಗಿದ್ದು, ನಿಜ ಖುಷಿಯ ಅನುಭವಿಸುವ ಸಮಯದಲ್ಲಿ ಒತ್ತಡ, ಖಿನ್ನತೆಗಳಿಗಷ್ಟೇ ಸೀಮಿತವಾಗುವ ನಾವು, ಯಾವಾಗಲೂ ನಮ್ಮ ಚಿಕ್ಕಂದಿನ ಬದುಕ ನೆನೆದು ಒಳಗೊಳಗೆ ಖುಷಿ ಪಡುತ್ತೇವಷ್ಟೆ. ಹಾಗಾದರೆ ಖುಷಿಯಾಗಿರುವುದು ಎಂದರೇನು ? ಎನ್ನುವ ಪ್ರಶ್ನೆಗೆ ಉತ್ತರ, ಖುಷಿಯ ಸಂದರ್ಭ-ಸನ್ನಿವೇಶಗಳು ಯಾವಾಗಲೂ, ಎಲ್ಲರಿಗೂ ಭಿನ್ನ ಸ್ವರೂಪದ್ದೇ ಆಗಿರುವ ಕಾರಣ, ಖುಷಿಯಾಗಿರುವುದೆಂದರೇ ಖುಷಿಯಾಗಿರುವುದಷ್ಟೇ ಆಗಿದೆ. ಆ  ಕಾರಣಕ್ಕಾಗಿಯೇ, ಜೀವನ ಮೌಲ್ಯವ ಹೆಚ್ಚಿಸುವ ಸಂತೋಷದ ಸನ್ನಿವೇಶ ಯಾವುದಾದರೇನು? ಯಾರಿದ್ದರೇನು? ಅನುಭವಿಸುವ ಆ ಕ್ಷಣ ನಮ್ಮದಾಗಿರಬೇಕಷ್ಟೆ.

          ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ ಎಂದು ಭಾವಿಸುವ ನಾವು, ಅದನ್ನು ಕಂಡುಕೊಳ್ಳುವ ಮಾರ್ಗದಲ್ಲಿ ಸೋತಿದ್ದೇವೆ ಎಂಬುದನ್ನು ತಿಳಿದಿಲ್ಲ. ನಮ್ಮಗಳಿಗಲ್ಲದ ಕಾರಣಗಳಿಗೇ ಹೆಚ್ಚು ತಲೆ ಕೆಡಿಸಿಕೊಳ್ಳುವ ನಾವು, ನಮ್ಮಿಷ್ಟಗಳ ಬದಿಗಿರಿಸಿ ಖುಷಿಗೆ ತಡೆಯಾಗಿ ನಿಲ್ಲುವ  ದ್ವೇಷ-ಅಸೂಯೆಗಳಿಗಷ್ಟೆ ಬದುಕಿ ಅಂತ್ಯ ಕಾಣುವ ಬದಲು, ದೇವರು-ಧರ್ಮ, ಜಾತಿ-ಲಿಂಗ, ಭಾಷೆ-ಬಣ್ಣ-ಪ್ರದೇಶಗಳಾಚೆ ನಾವಾಗಿ ಬದುಕಬೇಕಿದೆ. Because “Life is all about to live not to leave".

39 comments:

 1. ಬದುಕೆಂಬುದು ರಸದೌತಣ,ಸವಿಯಲು ಬಯಸಿದಾತ-ಸವೆಯಲು ಕಲಿತಿರಬೇಕು..ಸವೆಯುತ ಸವಿದರೆ ಖುಷಿಯ ಔತಣ

  ReplyDelete
 2. ಬದುಕೆಂಬುದು ರಸದೌತಣ,ಸವಿಯಲು ಬಯಸಿದಾತ-ಸವೆಯಲು ಕಲಿತಿರಬೇಕು..ಸವೆಯುತ ಸವಿದರೆ ಖುಷಿಯ ಔತಣ

  ReplyDelete
 3. Thnku sir......really nic.....

  ReplyDelete
 4. ಒಂದೊಳ್ಳೆಯ ಬರಹ ಸರ್. ಇದು ಈ ಸಮಾಜದ ಸಿರಿವಂತ, ಮೇಲ್ಜಾತಿಯ ಜನರಿಗೆ ಅನ್ವಯವಾಗದು. ತಳಸಮುದಾಯಗಳ ಜನರ ಬದುಕಿಗಂತೂ ನೀವು ಕನ್ನಡಿ ಹಿಡಿದಿದ್ದೀರಿ ಎನ್ನಬಹುದು.

  ReplyDelete
 5. ಅದ್ಭುತವಾದ ಬರಹ ಅಣ್ಣ,ಯುವಮನಸ್ಸುಗಳಿಗೆ ಸ್ಪೂರ್ತಿದಾಯಕವಾದ ಮತ್ತಷ್ಟು ಲೇಖನ ನಿಮ್ಮ ಬರವಣಿಗೆ ಮೂಲಕ ಉದ್ಭವವಾಗಲಿ...

  ReplyDelete
 6. Exactly ji.....applies to all the people irrespective of their different walks of life, your quality of Expressing the realistic feelings of the on going life is extra ordinary....keep writing

  ReplyDelete
 7. ನಿಮ್ ಮಾತು ನಿಜ ಖುಷಿಯಾಗಿರುವುದು ಎಂದರೆ ಖುಷಿಯಾಗಿರುವುದು ಅಷ್ಟೇ .... ಖುಷಿಗೆ ಬಡವ-ಶ್ರೀಮಂತ, ಜಾತಿ, ಧರ್ಮ, ಲಿಂಗ ಯಾವುದು ಮುಖ್ಯ ಅಲ್ಲ... ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇದೇ ನಮ್ಮ ಎದೆಯೊಳಗೆ ಎನ್ನುವ ಮಾತಿನಂತೆ ಬದುಕಿನ ಖುಷಿ ಇರುವುದು ನಮ್ಮೊಳಗೆ... ಪ್ರತಿಯೊಬ್ಬರೂ ಕಂಡುಕೊಳ್ಳುವ ರೀತಿ ಬೇರೆಬೇರೆ.... ಇವತ್ತಿನ ನಮ್ಮಗಳ ಪರಿಸ್ಥಿತಿ ಮತ್ತು ಮನಸ್ಥಿತಿ ಗೆ ನಿಮ್ಮ ಲೇಖನ ಕನ್ನಡಿ ಹಿಡಿದಂತಿದೆ......Shilpa narayan....

  ReplyDelete
 8. Wonderful sir nimma ವಿದ್ಯಾರ್ಥಿ..!

  ReplyDelete
 9. ಜೀವನ ಶಾಶ್ವತವಾಲ್ಲ ಬದುಕುವ ರೀತಿ ಶಾಶ್ವತ

  ReplyDelete
 10. ಕನ್ನಡದಲ್ಲಿ ಅಷ್ಟೊಂದು ಚನಾಗಿರೋ ಪದಗಳು ಇರಬೇಕಾದರೆ
  ನೀವು ಇಂಗ್ಲಿಷ್ ಬಳಕೆ ಮಾಡಿದ್ದು ನನಗೆ ಇಷ್ಟ ಆಗಲಿಲ್ಲ ಸರ್

  ReplyDelete
  Replies
  1. ಕನ್ನಡದ ಪದ ಇಲ್ಲ ಅಂತ ಅಲ್ಲ, ಅಲ್ಲಗೆ English ಸೂಕ್ತ ಅನಿಸ್ತು ಅದಿಕ್ಕೆ ಬರೆದೆ ಅಷ್ಟೆ

   Delete
 11. ಪಾಲಿಗೆ ಬಂದಿದ್ದು ಪಂಚಾಮೃತ.... ಕಹಿ ಯಾದರೂ,ಸೇವಿಸಾಬೇಕು ಸಿಹಿ ಯಾದರೂ ಸೇವಿಸಾಬೇಕು ,ಅವಾಗ ಅ ಸಮಯವು ಕಳೆದು ಹೂಗುತ್ತದೆ....super sir💐

  ReplyDelete
 12. Good lines sir and I loved that last line

  ReplyDelete
 13. Super sir, yelru edhunna artha madkond badukidare life is beautiful ��

  ReplyDelete
 14. Super sir but edhunna yelrunu artha madkond badhkudre , life is beautiful 😊

  ReplyDelete
 15. ಅಭ್ಬಾ ಎಂತಹ ಮಾತುಗಳು ...ಮನುಷ್ಯ ಸರ ವೇಗದಲ್ಲಿ ಎಲ್ಲವನ್ನು ಪಡೆಯುವ ಅಸೆಯಿಂದ ಬದುಕುವುದನ್ನೆ ಮರೆತ್ತಿದ್ದಾನೆ. ಬದುಕುವುದನ್ನು ಮರೆತ ಮನುಷ್ಯನಿಗೆ, ಇದೇ ಕಣೋ ನಿಜವಾದ ಬದುಕು ಎಂಬತಿದೆ ನಿಮ್ಮ ಮುದ್ದಾದ ಮಾತು........

  ReplyDelete