Tuesday, May 18, 2021

ಇದ್ದರೆಷ್ಟು! ಬಿದ್ದರೆಷ್ಟು!

ಸಂದೀಪ್ ಎಸ್ ರಾವಣೀಕರ್

                                             


    

    ಕೋವಿಡ್-19 ರಿಂದಾಗಿ ಶ್ರೀಸಾಮಾನ್ಯನ ಬದುಕು ಇಂದಿನ ಆಧುನಿಕ ಯುಗದಲ್ಲೂ ಅತ್ಯಂತ ಶೋಚನೀಯ ಸ್ಥಿತಿಗೆ ತಲುಪಿರುವುದು ದುರಂತವೇ ಸರಿ. ಭಾರತದಲ್ಲಿ ಆರೋಗ್ಯ ವಿಷಯವು ಹಲವು ದಶಕಗಳಿಂದಲೂ ನಿರ್ಲಕ್ಷಿಸಲ್ಪಟ್ಟರುವುದರಿಂದ, ಇಂದು ನಿಕೃಷ್ಟ ದಾರುಣ ಸ್ಥಿತಿಗೆ ತಲುಪುವಂತಾಗಿದೆ. ನಮ್ಮನ್ನಾಳುವವರ ದೂರದೃಷ್ಟಿಯಿಲ್ಲದ ನೀತಿ-ನಿಯಮಗಳು ಹಾಗೂ ಸರ್ಕಾರದ ಭಾಗವಾಗಿದ್ದು, ಜನಪರವಾದ ಆಡಳಿತ ನಡೆಸಲಾಗದ ಅದೆಷ್ಟೋ ಅಧಿಕಾರಿಗಳ ಆಡಳಿತ ವೈಫಲ್ಯವು, ಇಂದಿನ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

          ಅಂಕೆಗೂ ಸಿಗದಷ್ಟು ಸ್ಥಿತಿಗೆ ತಲುಪುತ್ತಿರುವ ಕೊರೋನಾದ ಹೊತ್ತಲ್ಲಿ, ಇದ್ದು ಇಲ್ಲದಂತಿರುವ…

·         so called ರಾಜಕಾರಣಿಗಳೇ! ತಮ್ಮ ಸರ್ಕಾರದ ಅವಧಿಯನ್ನು ಮಾತ್ರ ಉಳಿಸಿಕೊಳ್ಳಲು ತೋರುವ ನಿಮ್ಮ ಆತುರ, ವ್ಯವಹಾರ ಹಾಗೂ ಎಂ ಎಲ್ , ಸಚಿವ ಮತ್ತು ನಿಗಮ-ಮಂಡಳಿಗಳಿಗೆ ಆಯ್ಕೆಯಾಗುವಲ್ಲಿನ ನಿಮ್ಮ ಗಮನ, ಖಾತೆ ಸಿಕ್ಕಿಲ್ಲ - ಖಾತೆ ಸಿಕ್ಕಿಲ್ಲ ಎಂತೆಲ್ಲಾ ಬಡಬಡಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಸರ್ಕಾರವನ್ನೇ ಬೀಳಿಸುವ ನಿಮ್ಮ ಪವರ್ ಈಗ ಜನರ ಅಸಹಾಯಕತೆಯ ಮೇಲಿಲ್ಲವೇಕೆ? ಉತ್ತರಿಸಿ. 

·         ಅಧಿಕಾರದಲ್ಲಿದ್ದಾಗ ದಿನಪೂರ್ತಿ ಕಾಣಸಿಗುವ ಮಾಜಿಗಳೇ! ಅಶಾಶ್ವತವಾಗಿರುವ ಅಧಿಕಾರ ಪಡೆಯುವುದಾದರೂ ಹೇಗೆ ? ಎಂಬುದನ್ನು ಲೆಕ್ಕ ಹಾಕುವ ಬದಲು, ಇಂತಹ ತುರ್ತುಪರಿಸ್ಥಿತಿ ನಿವಾರಣೆಗೆ ನಿಮ್ಮ ಕೊಡುಗೆಯೇನು? ಹೇಳಿ. 

·         ಜಾತಿ - ಧರ್ಮವನ್ನು ಮುನ್ನೆಲೆಗೆ ತಂದು ಸಾವು-ನೋವುಗಳ ಮೇಲೆ, ಬೇಳೆ ಬೇಯಿಸಿಕೊಳ್ಳಲು ಟೊಂಕಕಟ್ಟಿ ನಿಂತಿರುವ ಪ್ರೀತಿಯ ಸಹವಾಸಿಗಳೇ! ಕರೋನ ವೈರಸ್ ಜಾತಿ ಮತ್ತು ಧರ್ಮ ಯಾವುದು? ದಯಮಾಡಿ ಹುಡುಕಿಕೊಡಿ.

·         ವ್ಯಕ್ತಿ ಆರಾಧನೆಯ ವ್ಯಸನಿಗಳಾಗಿರುವ ಪ್ರಿಯ ಬಂಧುಗಳೇ! ನಿಮ್ಮ ದ್ವೇಷಕಾರುವ ಅಸಂವಿಧಾನಿಕವಾದ ನಿಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ನಿಂದ ಅದೆಷ್ಟು ಕೋರೋನಾದ ಸಾವು - ನೋವನ್ನು ತಡೆಯಲಾಗಿದೆ? ಲೆಕ್ಕಕೊಡಿ.

·         ಕೇವಲ ನಕರಾತ್ಮಕ ವಿಷಯಗಳನ್ನೇ ವಿಜೃಂಭಿಸುವ, ಹಲವರ ವಕ್ತಾರರಂತೆ ವರ್ತಿಸುವ ಮಾಧ್ಯಮಗಳೇ! ನಿಮ್ಮ ಅದ್ಯಾವ ಕಾರ್ಯಕ್ರಮವು ಜನರಲ್ಲಿ ಧನಾತ್ಮಕ ಭಾವನೆ ಮೂಡಿಸಿದೆ ಹೇಳಿ. ಜನರಲ್ಲಿ ಭಯ, ಆತಂಕ, ಕೋಮುಭಾವನೇ ಹೆಚ್ಚಿಸುವುದೇ ನಿಮ್ಮ ಧ್ಯೇಯವೇ? ತಿಳಿಸಿಬಿಡಿ.

·         ಜನರ ಭಯವನ್ನೇ ಬಂಡವಾಳವಾಗಿಸಿಕೊಂಡು ಇಲ್ಲದ್ದನ್ನೆಲ್ಲಾ ಸೃಷ್ಟಿಸುವ ದೇವಮಾನವರೇ! ಅದೆಲ್ಲಿ ಅವಿತಿರುವಿರಿ? ಅದ್ಯಾವ ಪೂಜೆ-ಪುನಸ್ಕಾರ, ವ್ರತ-ಭಜನೆಗಳು ಕೊರೋನ ಓಡಿಸುತ್ತವೆ? ಈಗಲಾದರೂ ಹೇಳಿಕೊಡಿ.

·         ಸರ್ವಜನರ ಜೀವ ಪರಿಸರವನ್ನು ಬಂಡವಾಳದಿಂದ ಹಾಳು ಮಾಡಿ, ಲಾಭಪಡೆಯುವ ಕಾರ್ಪೊರೇಟ್ ಕುಳಗಳೇ! ನಿಮ್ಮಲ್ಲಿ ಅದೆಷ್ಟು ಜನ ಸಾಮಾಜಿಕ ಮತ್ತು ಪರಿಸರ ಜೀವನವ ವ್ಯಾಲ್ಯೂ ಮಾಡಿದ್ದೀರಿ? ಹೇಳಿ.

·         ಶಿಳ್ಳೆ - ಕೇಕೆಗಳ ಗುಂಗಲ್ಲೆ ಬಿದ್ದಿರುವ ಸೆಲೆಬ್ರಿಟಿಗಳೇ! ಕೊರೋನ, ನಿಮ್ಮ ಅದೆಷ್ಟೋ ಅಭಿಮಾನಿಗಳ ಉಸಿರು ನಿಲ್ಲಿಸಿರುವುದರ ಬಗೆಗೆ ಏನಾದರೂ ಅರಿವಿದೆಯೇ? ವಿಚಾರಿಸಿರಿ.

·         ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಭ್ರಷ್ಟಾಚಾರ, ಅಸಡ್ಡೆ, ಉಡಾಫೆಯಲ್ಲೆ ನಿರತರಾಗಿರುವ ವಿರುದ್ಧ ಮೌನ ತಾಳಿರುವ ದೇಶ ಬಾಂಧವರೇ! ನಿಮ್ಮ ತಿಳುವಳಿಕೆಗೆ ಇನ್ನೆಷ್ಟು ಪ್ರಾಣ ಬಲಿಯಾಗಬೇಕು? ಹೇಳಿ.

          ಪ್ರಶ್ನೆಗಳ ಉತ್ತರದ ನಿರೀಕ್ಷೆಯಲ್ಲಿಲ್ಲ,  ಅದು ಬೇಕಾಗೂ ಇಲ್ಲ. ಆದರೆ, ಇದೇ ಇಂದಿನ ನಮ್ಮ ದೇಶದ ವಾಸ್ತವ. ಪ್ರಸ್ತುತ ಭಾರತದ ಅಸಹಾಯಕ ಅನಾಥ ಪರಿಸ್ಥಿತಿಗೆ, ಈಗಲಾದರೂ ಸ್ಪಂದಿಸುವವರು ಬೇಕಾಗಿದ್ದಾರೆ. ಎಲ್ಲರನ್ನೂ ಸಲಹುತ್ತೇವೆ ಎನ್ನುವ ಹುಸಿ ಭ್ರಮೆಯನ್ನು ಮೂಡಿಸಿ, ವೈರಸ್ ನಂತೆಯೇ ಕಾಣಲು ಸಿಗದ ಅದೆಷ್ಟೋ ಈ ತರಹದ ಮನುಷ್ಯ ಕ್ರಿಮಿಗಳು ಇದ್ದರೆಷ್ಟು! ಬಿದ್ದರೆಷ್ಟು!

23 comments:

 1. Nijavagiyu satyada mahithi Sir, namma nu haaluva swarthada rajakaranigalu and ithare vyakthigalu, corona samayadalli swarthada badukinda janarannu bali koduvudannu nimma mahithi li nodabahudu.
  Thank you Sir mahithi nididakke.

  ReplyDelete
 2. Truth is bitter, well said Sandeep

  -Ningaraju

  ReplyDelete
 3. Nija sir yalla Rajakaranigalu swarthigale...

  ReplyDelete
 4. True fact.. e situation ellarannu mownavaagiside.. yavudu shashwathavalla, yaaru shashwathavalla embudannu artha madiside.. well said sir👏

  ReplyDelete
 5. Good, excellent article. Brother What ever article you have written all articles are very good and excellent. These articles are true and vaastava.

  ReplyDelete
 6. ಸಮಯ ಸಂದರ್ಭಕ್ಕೆ ಪ್ರತಿಕ್ರಯಿಸದ ರಾಜಕಾರಣಿಗಳು ಹೊಲದಲ್ಲಿರುವ ಕಳೆಯ ತರ ಎಂದಾದರೂ ಒಮ್ಮೆ ಕಿತ್ತೆಸೆಯುತ್ತೇವೆ

  ReplyDelete
 7. ಸ್ನೇಹಿತ ಸಂದೀಪ್
  ಕೋವಿಡ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂದಿನ ದಿನಮಾನಗಳಲ್ಲಿ ತಮ್ಮ ಅಭಿಪ್ರಾಯ ಸಂದರ್ಭವೋಚಿತ ಹಾಗೂ ಸೂಕ್ತ. ನಮ್ಮ ಜನಸಾಮಾನ್ಯರು ಬದಲಾವಣೆ ಬಯಸುವುದು ತಪ್ಪಲ್ಲ. ಆದರೆ ಎಮೋಷನಲ್ ಬ್ಲಾಕ್ಮೇಲ್ ಮಾಡುವ ರಾಜಕಾರಣಿ ಗಳನ್ನು ನಂಬಿದ್ದಕ್ಕಾಗಿ ಇಂದು ಭಾರತ ಸೋಚನೀಯ ಸ್ಥಿತಿಗೆ ತಳ್ಳಲ್ಪಟ್ಟಿದೆ. ಜನರಿಗೆ ಈಗ ಜ್ಞಾನೋದಯ ವಾಗುತ್ತಿದೆ. ಈ ಸರ್ಕಾರಗಳು ಜನಸಾಮಾನ್ಯರಿಗೆ ಅಲ್ಲ, ಇವು ಬಂಡವಾಳ ಸಾಹಿಗಳ ಪರ ಎಂದು. ಕೇವಲ ಪ್ರಚಾರ ಕ್ಕೆ ಸೀಮಿತವಾಗಿರುವ ಸರ್ಕಾರಗಳು ಜನಸಾಮಾನ್ಯರಿಗೆ ಬೇಕಾಗಿಲ್ಲ. ದುಡಿಯಲು ಕೆಲಸ ಕೊಡುವ ಸರ್ಕಾರ ಬೇಕು. ನಾಗರೀಕರ ಜೀವ ಉಳಿಸುವ ಸರ್ಕಾರ ಬೇಕು. ದೇಶದ ರಕ್ಷಣೆ ಮಾಡುವ ಸರ್ಕಾರ ಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ಮೂಲ ಸೌಕರ್ಯ ಕೊಡುವ ಸರ್ಕಾರ ಬೇಕು.

  ReplyDelete
 8. ಸತ್ಯ ಸದಾ ಕಹಿ..

  ReplyDelete
 9. ಸಂದೀಪ್ ನಮ್ಮ ಪ್ರಜೆಗಳು ಇನ್ನಾದರು ತಿಳಿದುಕೊಳ್ಳಬೇಕು ರಾಜಕಾರಣಿಗಳು ನಮ್ಮ ಅಮೂಲ್ಯವಾದ ಮತಕ್ಕೆ ಕೊಡೊ ಒಂದು ದಿನದ ನೋಟು ಮತ್ತು ಮಧ್ಯೆ (ಎಣ್ಣೆ) ಐದು ವರ್ಷ ನರಕಕ್ಕೆ ತಳುತ್ತದೆ ಎಂಬುದನ್ನು ಅರಿತು ಸರಿಯಾದ ವೆಕ್ತಿ ನೋಡಿ ಇದು ಆಯ್ಕೆ ಮಾಡಿ ದೇಶ ಉಳಿಸಿಕೊಳ್ಳಬೇಕು....,👍👍

  ReplyDelete