Friday, May 29, 2020

ಹೀಗೊಂದು ಆಯಸ್ಸಿನ ಲೆಕ್ಕಚಾರ!


                     -ಸಂದೀಪ್ ಎಸ್ ರಾವಣೀಕರ್ಯಂತ್ರಗಳಂತೆ ಆಗಿರುವ ಬದುಕು  ಹುಟ್ಟಿನಿಂದ ಸಾಯುವ ತನಕ ಹಲವು ಮಹತ್ವಾಕಾಂಕ್ಷೆಗಳನ್ನು ಹೊತ್ತು ಸಾಗುತ್ತದೆ. ಬದುಕಿರುವಷ್ಟು ದಿವಸ ನೆಮ್ಮದಿಯಿಂದಿರಬೇಕು  ಎಂದು ಭಾವಿಸುವ ನಾವುಗಳು ಜೀವನದುದ್ದಕ್ಕೂ ಬರುವ ಹಲವು ಎಡರು-ತೊಡರುಗಳೊಂದಿಗೆ ಜೀವಿಸುವುದನ್ನು ಅಭ್ಯಾಸ ಮಾಡಿರುತ್ತೇವೆ.  ಅಂತೆಯೇ, ಸಿಗಬಹುದಾದ  ಒಂದಷ್ಟು ಕೆಲಸಗಳಿಂದ ಸುದೀರ್ಘ ಯೋಜನೆಗಳನ್ನು ರೂಪಿಸಿ,  ಕೊನೆಗಾಲಕ್ಕೂ ಹೀಗೆ ಬದುಕಿರುತ್ತೇವೆ ಎಂಬಂತೆ  ಬೀಗುತ್ತ ಭಷ್ಯತ್ತಿನ ಊಹೆಯಲ್ಲಿ ವಾಸ್ತವಿಕ ಬದುಕನ್ನು ಆದಷ್ಟು ಮರೆತಿರುತ್ತೇವೆ. ಎಪ್ಪತ್ತು ವರ್ಷಗಳಷ್ಟು ದೀರ್ಘಾಯಸ್ಸಿನ ಆಶಾಭಾವನೆ ಹೊಂದಿರುವ ನಾವುಗಳು ಅದೆಷ್ಟು  ಕ್ವಾಲಿಟಿ ದಿನಗಳನ್ನು ನಮ್ಮದಾಗಿಸಿಕೊಂಡಿದ್ದೇವೆ ಎಂದು ಯೋಚಿಸಿದಾಗ, ಸಮಯ ಕಳೆದು ಹೋಗುತ್ತಿದೆ ಎಂದೆನಿಸದೆ ಇರಲಾರದು.

 ಸ್ವಲ್ಪ ಯೋಚಿಸಿ, ನಮ್ಮಗಳ ಜೀವಿತಾವಧಿ ಸುಮಾರು ಎಪ್ಪತ್ತು ವರ್ಷಗಳು ಎಂದು ಅಂದಾಜಿಸಿದರೂ ಸಹ, ಅಷ್ಟು ವರ್ಷಗಳನ್ನು ನಾವು ನಿಜವಾಗಿಯೂ ಅಂದುಕೊಂಡಂತೆ ಬದುಕುವುದಕ್ಕೆ ಬಳಸುತ್ತಿದ್ದೇವಾ ಎಂಬ ಸಂಶಯ ಬರದೇ ಇರದು.  ಗಮನಿಸಿ  ಎಪ್ಪತ್ತು ವರ್ಷಗಳು ಅಂದರೆ 25,550  ದಿನಗಳು. ಒಂದು ದಿನಕ್ಕೆ 24 ಗಂಟೆ ಯಾದರೆ,  ನಾವೆಲ್ಲರೂ ಇದೇ 24 ಗಂಟೆಯ 25,500 ದಿನಗಳನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದನ್ನು ಒಂದು ಸರಳ ಗಣಿತದ ಲೆಕ್ಕಚಾರದೊಂದಿಗೆ ನೋಡೋಣ.

 ಒಬ್ಬ ವ್ಯಕ್ತಿ 24 ಗಂಟೆಯಲ್ಲಿ  ಎಂಟು ಗಂಟೆಗಳಷ್ಟು ಮಲಗಿದರೆ, 70 ವರ್ಷಗಳಲ್ಲಿ ಅಂದರೆ 25,500 ದಿನಗಳಲ್ಲಿ ಸುಮಾರು 8,517 ದಿನಗಳಷ್ಟು ಕಳೆದೇಹೋಗುತ್ತದೆ. ಅರ್ಥಾತ್ 23 ವರ್ಷಗಳಷ್ಟು ನಾವು ನಿದ್ರೆಯನ್ನೇ ಮಾಡಿರುತ್ತೇವೆ.

            ಇನ್ನು ಜಂಜಾಟದ ಬದುಕಲ್ಲಿ ಅನೇಕ ಕೆಲಸಗಳಲ್ಲಿ ಬ್ಯುಸಿಯಾಗುವ ನಾವುಗಳು, ಸಮಯ ಕಳೆಯುವ ಹಲವು ಮಾರ್ಗಗಳನ್ನು ಒಮ್ಮೆ ಗಮನಿಸಿದರೆ: ಸಾಮಾನ್ಯವಾಗಿ ನಾವು ದಿನದ 6 ಗಂಟೆಯಷ್ಟು ಕೆಲಸದ ಅಥವಾ ಶಾಲಾ-ಕಾಲೇಜುಗಳ ಒತ್ತಡದಲ್ಲೇ ಇರುತ್ತವೆ. ಹಾಗಾದರೆ 70 ವರ್ಷಗಳಲ್ಲಿ ಸುಮಾರು 6,388 ದಿನಗಳು ಅಂದರೆ 17.5 ವರ್ಷಗಳು ಇದರಲ್ಲೇ ಕಳೆದು ಹೋಗುತ್ತದೆ.

 ದಿನದ ನಿತ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲಿ ಹಾಗೂ ಮೂರು ಹೊತ್ತಿನ ಊಟದ ಸಮಯ ಮತ್ತು ನಾವುಗಳು ರೆಡಿ ಆಗುವುದಕ್ಕೆ 2 ಗಂಟೆಯಷ್ಟು ಸಮಯ ಅನಾಯಾಸವಾಗಿ ಕಳೆದೋಗಿರುತ್ತದೆ. ಇದು ನಮ್ಮ ಜೀವಿತಾವಧಿಯ 2,129 ದಿನಗಳು ಅಂದರೆ 5.83 ವರ್ಷಗಳಷ್ಟುನ್ನು ಒಳಗೊಂಡಿದೆ.

ಗ್ಯಾಜೆಟ್ ಯುಗದಲ್ಲಿರುವ ನಾವುಗಳು, ಊಟ ಬಿಟ್ಟರೂ ಮೊಬೈಲ್ ಮತ್ತು ಟಿವಿ ಬಿಟ್ಟಿರಲಾರೆವು ಎಂಬಂತಾಗಿದೆ. ದಿನದ 24 ಗಂಟೆಯಲ್ಲಿ ಕನಿಷ್ಠ 2 ಗಂಟೆಯಷ್ಟು ಮೊಬೈಲ್ ಮತ್ತು ಟಿವಿಗೆ ಮೀಸಲಿಟ್ಟರೆ  ಮತ್ತದೇ 2,129 ದಿನಗಳು ಅಂದರೆ, 5.83 ವರ್ಷಗಳಷ್ಟು ಅದರೊಟ್ಟಿಗೆ ಹೋಗಿಬಿಡುತ್ತದೆ.

 ಸಮಾಜ ಜೀವಿಯಾಗಿ ನಾವುಗಳು ಸ್ನೇಹಿತ/ತೆಯರ ಒಟ್ಟಿಗೆ ಮತ್ತು ಕುಟುಂಬದವರೊಟ್ಟಿಗೆ ಕನಿಷ್ಠ 2 ಗಂಟೆಯನ್ನಾದರೂ ಮಾತುಕತೆಗಾಗಲಿ, ಆಟ ಆಡುವುದಕ್ಕಾಗಲಿ, ಇನ್ನಿತರ ಯಾವುದೇ ಕಾರಣಕ್ಕಾದರೂ  ಬಳಸದೆ ಇರಲಾರೆವು. ಇದು ಸಹಾ, 25,550 ದಿನಗಳ ಜೀವಿತಾವಧಿಯಲ್ಲಿ 2,129 ದಿನಗಳಷ್ಟನ್ನು  ಒಳಗೊಂಡ 5.83 ವರ್ಷಗಳನ್ನು ಮುಗಿಸಿಬಿಡುತ್ತದೆ.

            ಮೇಲಿನ ಅಂಶಗಳು ಸಾಮಾನ್ಯ ಜೀವಿಯಾಗಿರುವ ನಾವುಗಳು ಬಳಸುವ ದಿನದ ವೇಳಾಪಟ್ಟಿಯಾಗಿದ್ದು, ಕೆಲವೊಮ್ಮೆ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಬಹುದು. ಆದಾಗ್ಯೂ, ದಿನದ 24 ಗಂಟೆಯಲ್ಲಿ 20 ಗಂಟೆ ಕಳೆದೋಗುತ್ತದೆ. ಇನ್ನುಳಿದ 4 ಗಂಟೆ ಅಂದರೆ ಜೀವಿತಾವಧಿಯ 4,258 ದಿನಗಳು, ಅರ್ಥಾತ್ 11.67 ವರ್ಷಗಳಷ್ಟೇ ವಯಕ್ತಿಕವಾಗಿ ನಮಗೆ ಉಳಿದಿರುವ ಸಮಯ. ಬದುಕನ್ನು ಸುಂದರವಾಗಿರಿಸುವುದಕ್ಕೆ  ನಮಗೆ ಇರುವುದು ಇಷ್ಟೇ ಕಡಿಮೆ ಸಮಯ. ಹೀಗಿರುವಾಗ, ಇಂದಿನ ಧರ್ಮಜಾತಿಲಿಂಗಸ್ಥಳದ ಆಧಾರದ ಮೇಲೆ  ನಾವು ಆಡುತ್ತಿರುವ ಯುದ್ಧ ಜಗಳಗಳುಮನಸ್ತಾಪಗಳನ್ನು ಗಮನಿಸಿದರೆ ನಾವು ಜೀವಿಸುವುದಕ್ಕೆ ಇಲ್ಲಿದ್ದೀವಾ ಅಥವಾ ದೈಹಿಕ-ಮಾನಸಿಕ ಮನಸ್ತಾಪಗಳ ಕಿರಿಕಿರಿಯಿಂದ ಬದುಕುವುದಕ್ಕೆ ಇದ್ದೀವಾ ಎಂದೆನಿಸದಿರದು.

ವೈಯಕ್ತಿಕವಾಗಿ ಏನಾದರೂ ಸಾಧಿಸಲು, ಯೋಚಿಸಲು,  ಯೋಜಿಸಲು, ನಿರ್ವಹಿಸಲು, ಪ್ರೀತಿ ಹಂಚಲು ಮತ್ತು ಪಡೆಯಲು ಇರುವ ಕಡಿಮೆ ಸಮಯ ಸರಿಯಾಗಿ ಬಳಕೆಯಾಗಲಿ.  ನಾವು ಇರುವೆಡೆ ಪ್ರೀತಿ-ಕರುಣೆ; ಮಮತೆ-ಸಹನೆಯ ಸೌಹಾರ್ದ ಬದುಕು ನಮ್ಮದಾಗಲಿ ಎಂಬುದಷ್ಟೇ ಆಶಯ.

21 comments:

 1. Sir bahal chennag analysis maadi correctagi helidhiri. Totally agree with you.👍✌️

  ReplyDelete
 2. Never thought all our activities of life time in terms of hours and days.You made me to realise the same.Thank you

  ReplyDelete
 3. ತುಂಬಾ ಅಮೂಲ್ಯವಾದ ಮಾಹಿತಿಯನ್ನು ನೀಡಿದ್ದೀರಿ ಸರ್..🙏🙏 it helps us to think what we have to do within reaming period.. thank you soo much..😊

  ReplyDelete
 4. ನಿಜಕ್ಕೂ ನೀವು ವಾಣಿಜ್ಯಶಾಸ್ತ್ರ ಉಪನ್ಯಾಸಕರೆಂದು ನಿಮ್ಮ ಲೆಕ್ಕಾಚಾರದಿಂದ ಮತ್ತೊಮ್ಮೆ ಸಾಬೀತಾಗಿದೆ.... ಒಂದು ದಿನ ಜೀವದ ಚಿಂತೆಯಾದರೆ ಮತ್ತೊಂದು ದಿನ ಜೀವನ ನಿರ್ವಹಣೆಯ ಚಿಂತೆ..... ಸದ್ಯದ ಪರಿಸ್ಥಿತಿಯಲ್ಲಿ ಚಿಂತೆಯೆಂಬ ಸಂತೆಯಲ್ಲಿ ಮುಳುಗಿರುವ ಮನುಷ್ಯನಿಗೆ 75 ವರ್ಷ ಆಯಸ್ಸಿನ ಲೆಕ್ಕಾಚಾರ ದೂರದ ಮಾತೇ ಸರಿ..... ಈಗ ಉಳಿದಿರುವ ದಾರಿಯೆಂದರೆ ಅನುದಿನ ಅನುಕ್ಷಣ ವನ್ನು ಅಭಿನಯಿಸದೆ ಅನುಭವಿಸುತ್ತಾ ಬದುಕ ಬೇಕಷ್ಟೇ....... ಲಾಕ್ ಡೌನ್ ಮುಗಿದ ನಂತರವೂ ನಿಮ್ಮ ಬರವಣಿಗೆ ಹೀಗೆ ಮುಗಿಯದೆ ಮುಂದುವರಿಯಲಿ..... ಜೀವನವನ್ನು ಜೀವಿಸಬೇಕು ಎಂಬ ನಿಮ್ಮ ಬಯಕೆ ನಿಮ್ಮ ಲೇಖನದಲ್ಲಿ ವ್ಯಕ್ತವಾಗಿರುವುದು ಅಭಿನಂದನಾರ್ಹ............. ಶಿಲ್ಪಾ ನಾರಾಯಣ್.💐💐💐💐💐💐

  ReplyDelete
 5. This comment has been removed by a blog administrator.

  ReplyDelete
 6. The way u have described about one's life span as how life goes on includes one's success n failure , ups n downs , love n hate , acceptance n rejection etc in terms of days n years in this span 70 yrs is really unique n creative anna.. A good one!! N most importantly one must accept the reality n stop thinking about mere future which s the main toxic to spoil our present happiness n Peace.

  ReplyDelete
 7. Reality of life bro..... Nija navi est time waste madtidivi anta evatte gottadaddu really it's true life. Nam lifestyle namge tilisiddakke thanks

  ReplyDelete
 8. Good analysis of lifetime .Sandeep ...and we think from this angle very rarely and waste our time very often ...

  ReplyDelete
 9. Very nice article..really defining life and how it should be in remaining days.

  ReplyDelete
 10. E nim article ali thumbha meaning ide sir time bhagee 👏👏

  ReplyDelete
 11. Great thinking, wonderful analysis sir

  ReplyDelete
 12. Nice thinking,It also describes the value of life.

  ReplyDelete
 13. Great thinking and wonderful analysis for life sir....nav estu time West madidvi antha artha aguthe sir

  ReplyDelete
 14. Superb sir. Truth is reflected in mathematical terms

  ReplyDelete